logo

ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಪೂರ್ವಿಕ್ ಎಸ್.ವಿ.ದಾಸ್ ಗೆ ವಿಜ್ಞಾನ ವಿಭಾಗದಲ್ಲಿ ಒಲಿದ ಐದನೇ ರ‍್ಯಾಂಕ್‌ ತುಮಕೂರು: ಏ.11: ತುಮ

ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಪೂರ್ವಿಕ್ ಎಸ್.ವಿ.ದಾಸ್ ಗೆ ವಿಜ್ಞಾನ ವಿಭಾಗದಲ್ಲಿ ಒಲಿದ ಐದನೇ ರ‍್ಯಾಂಕ್‌


ತುಮಕೂರು: ಏ.11: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ, ಹುಲಿಯೂರುದುರ್ಗ ಹೋಬಳಿಯ ಚೌಡನಕುಪ್ಪೆ ಗ್ರಾಮದ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಯುಜಿಸಿ-ಮಹಿಳಾ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಸಿ.ಡಿ. ವೆಂಕಟೇಶ್ ಮತ್ತು ಡಾ. ಶಶಿಕಲಾ ದಂಪತಿಯ ಪುತ್ರನಾದ ಪೂರ್ವಿಕ್ ಎಸ್.ವಿ.ದಾಸ್ ಅವರು ಬೆಂಗಳೂರಿನ ಶಾರದ ನಗರ ವಸಂತಪುರ, ಉತ್ತರಹಳ್ಳಿ ಮುಖ್ಯ ರಸ್ತೆಯ ವೇದಾಂತ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಿನ್ನೆ ಬಿಡುಗಡೆಯಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 594 ಅಂಕ ಪಡೆದು ರಾಜ್ಯಕ್ಕೆ ಐದನೇ ರ‍್ಯಾಂಕ್‌ ಪಡೆದು ಈ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಾಂಶುಪಾಲರು, ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೋಷಕರು, ಕುಟುಂಬಸ್ಥರು, ಊರಿನ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

0
0 views